ಅದಾರ ಪೂನವಾಲ (ಜನನ ೧೪ ಜನವರಿ ೧೯೮೧) ಒಬ್ಬ ಭಾರತೀಯ ಉದ್ಯಮಿ. ಅವರು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪೂನಾವಲ್ಲ ಫಿನ್‌ಕಾರ್ಪ್‌ನ ಅಧ್ಯಕ್ಷರಾಗಿದ್ದಾರೆ. 1966 ರಲ್ಲಿ ಅವರ ತಂದೆ ಸೈರಸ್ ಪೂನಾವಾಲಾ ಇದನ್ನ ಸ್ಥಾಪಿಸಿದರು,. ಈ ಸಂಸ್ಥೆ ಉತ್ಪಾದಿಸಿದುವ ಲಸಿಕೆಗಳ ಪ್ರಮಾಣ ಗಮನಿಸಿದರೆ ಇದು ಸಂಖ್ಯೆಯಲ್ಲಿ ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸಂಸ್ಥೆ. == ವೈಯಕ್ತಿಕ ಜೀವನ == ಅದಾರ ಪೂನಾವಾಲಾ ಅವರು ಪಾರ್ಸಿ ( ಜೋರಾಸ್ಟ್ರಿಯನ್ ) ದರ್ಮಕ್ಕೆ ಸೇರಿದವರು. ಇವರು ಸೈರಸ್ ಪೂನಾವಾಲಾ ಅವರ ಮಗ. ಇವರು ನತಾಶಾ ಪೂನಾವಾಲಾ ಅವರನ್ನು ವಿವಾಹವಾಗಿದ್ದಾರೆ ಇವರಿಗೆ ಇಬ್ಬರು ಮಕ್ಕಳು . ಡಿಸೆಂಬರ್ ೨೦೨೩ ರಲ್ಲಿ, ಪೂನಾವಲ್ಲ ಲಂಡನ್‌ನಲ್ಲಿ ೧,೪೪೬ ಕೋಟಿ ರೂಪಾಯಿ ಮೌಲ್ಯದ ಅತ್ಯಂತ ದುಬಾರಿ ಆಸ್ತಿಯನ್ನು ಖರೀದಿಸಿದರು. == ಶಿಕ್ಷಣ == ಅದಾರ ಪೂನವಾಲ ಅವರು ಬಿಷಪ್ ಸ್ಕೂಲ್ (ಪುಣೆ) ಮತ್ತು ಸೇಂಟ್ ಎಡ್ಮಂಡ್ ಸ್ಕೂಲ್ ಕ್ಯಾಂಟರ್ಬರಿಯಲ್ಲಿ ಶಿಕ್ಷಣ ಪಡೆದರು ಮತ್ತು ನಂತರ ವೆಸ್ಟ್ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು . == ವೃತ್ತಿ == ಪೂನಾವಾಲ ಅವರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ನಂತರ ೨೦೦೧ ರಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಸೇರಿಕೂಂಡರು. ೩೫ ದೇಶಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ, ಪೂನವಾಲ ಕಂಪನಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆ, ಹೊಸ ಉತ್ಪನ್ನಗಳ ಪರವಾನಗಿ ಮತ್ತು ಯುನಿಸೆಫ್ ಮತ್ತು ಪ್ಯಾನ್ ಅಮೇರಿಕನ್ ಆರೋಗ್ಯ ಸಂಸ್ಥೆ ಸೇರಿದಂತೆ ವಿಶ್ವಸಂಸ್ಥೆಯ ಏಜೆನ್ಸಿಗಳಿಗೆ ಲಸಿಕೆ ಪೂರೈಕೆಮಾಡುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಪೂರ್ವ-ಅರ್ಹತೆಯನ್ನು ಪಡೆಯುವುದರ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ೨೦೧೫ ರ ಹೊತ್ತಿಗೆ, ಅವರು ಕಂಪನಿಯು ಉತ್ಪನ್ನಗಳನ್ನು ೧೪೦ ದೇಶಗಳಿಗೆ ರಫ್ತು ಮಾಡಿಸಿದ್ದಾರೆ; ಸಂಸ್ಥೆಯ ಆದಾಯವು ೮೫ ಭಾಗ ವಿದೇಶದಿಂದ ಬಂದಿದೆ. ೨೦೧೧ ರಲ್ಲಿಸಂಸ್ಥೆಯ ಸಿ.ಇ.ಒ ಆದರು. ೨೦೧೨ ರಲ್ಲಿ, ನೆದರ್ಲ್ಯಾಂಡ್ಸ್ ಮೂಲದ ಸರ್ಕಾರಿ ಲಸಿಕೆ ತಯಾರಿಕಾ ಕಂಪನಿಯಾದ ಬಿಲ್ಥೋವನ್ ಬಯೋಲಾಜಿಕಲ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಪೂನಾವಾಲ ಅವರು ಜಾಗತಿಕ ಲಸಿಕೆ ಒಕ್ಕೂಟವಾದ ಜಿ.ಎ.ವಿ.ಐ. ಅಲಯನ್ಸ್‌ನ ಮಂಡಳಿಯ ಸದಸ್ಯರಾಗಿದ್ದಾರೆ. ೨೦೧೪ ರಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ನ ಪೋಲಿಯೊ ಲಸಿಕೆ ಪ್ರಾರಂಭಿಸಿದರು ಇದು ಸಂಸ್ಥೆಯ ಅತ್ಯುತ್ತಮ ಉತ್ಪನ್ನವಾಗಿ ಮಾರಾಟವಾಯಿತು. ಅದೇ ವರ್ಷದಲ್ಲಿ ಡೆಂಗ್ಯೂ ಮತ್ತು ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆಗಳನ್ನು ತಯರಿಸಲು ಪ್ರಾರಂಬಿಸಿದರು . ಪ್ರಸ್ತುತ ಅವರು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿ.ಇ.ಒ ಆಗಿದ್ದಾರೆ. ೩೧ ಮೇ ೨೦೨೧ ರಂದು, ಕಂಪನಿಯಲ್ಲಿ ೬೬% ಪಾಲನ್ನು ಹೂಂದಿದ ನಂತರ ಅವರನ್ನು ಪೂನಾವಲ್ಲ ಫಿನ್‌ಕಾರ್ಪ್‌ನ ಅಧ್ಯಕ್ಷರಾಗಿ ನೇಮಿಸಲಾಯಿತು. ದಿ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಕೋವಿಡ್-೧೯ ಲಸಿಕೆಗಳ ಬೇಡಿಕೆಯಿಂದಾಗಿ ಬಂದ ಬೆದರಿಕೆಗಳಿಂದಾಗಿ ಭಾರತವನ್ನು ಬಿಟ್ಟು ಲಂಡನ್‌ಗೆ ಹೋಗುತಿದ್ದೇನೆ ಎಂದು ಪೂನಾವಾಲ ಹೇಳಿದರು. ಈ ಬೆದರಿಕೆಗಳಿಂದ ಭಾರತ ಸರ್ಕಾರವು ಅವರಿಗೆ 'ವೈ' ವರ್ಗದ ಭದ್ರತೆಯನ್ನು ಒದಗಿಸಿದೆ. . ಭಾರತದಲ್ಲಿ ನಡೆಯುತ್ತಿರುವ ಉತ್ಪಾದನೆಯ ಜೊತೆಗೆ ಭಾರತದ ಹೊರಗೆ ಕೋವಿಡ್ ಲಸಿಕೆ ಉತ್ಪಾದನೆಯನ್ನು ಪ್ರಾರಂಭಿಸಿದರು . == ಪರೋಪಕಾರ == ೨೦೨೦ ರಲ್ಲಿ, ಪೂನಾವಾಲ ಲಸಿಕೆಗಳ ಸಂಶೋಧನಾ ಕಟ್ಟಡದ ರಚನೆಗೆ ನಿಧಿಯನ್ನು ನೀಡಲು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ $66 ಮಿಲಿಯನ್ ದೇಣಿಗೆ ನೀಡುವುದಾಗಿ ಸಂಸ್ಥೆ ಘೋಷಿಸಿತು. == ಪ್ರಶಸ್ತಿಗಳು == ೨೦೧೬ ರಲ್ಲಿ, ಅವರು ಮ್ಯಾಗಜೀನ್‌ನಿಂದ ವರ್ಷದ ಫಿಲಂಥರೊಪಿಸ್ಟ್(ಲೋಕೋಪಕಾರಿ) ಪ್ರಶಸ್ತಿಯನ್ನು ಪಡೆದರು. ೨೦೧೭ ರಲ್ಲಿ, ಅವರು ಹಾಲ್ ಆಫ್ ಫೇಮ್ ಅವಾರ್ಡ್ಸ್ ವಿಭಾಗದಲ್ಲಿ ಹ್ಯುಮ್ಯಾನಿಟೆರಿಯನ್ ಎನ್ದೊವರ್ ಅವಾರ್ಡ್. ಮತ್ತು -News18 ನಲ್ಲಿ ಸಿ.ಎಸ್.ಅರ್. ವ್ಯಾಪಾರ ವಿಭಾಗದಲ್ಲಿ ವರ್ಷದ ಭಾರತೀಯ ಪ್ರಶಸ್ತಿಯನ್ನು ಸಹ ಪಡೆದರು. ೨೦೧೮ ರಲ್ಲಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ವರ್ಷದ ಉದ್ಯಮ ನಾಯಕನ ಇಟಿ ಎಡ್ಜ್ ಮಹಾರಾಷ್ಟ್ರ ಅಚೀವರ್ಸ್ ಪ್ರಶಸ್ತಿಗಳನ್ನು ಪೂನಾವಾಲಾ ಅವರಿಗೆ ನೀಡಿದರು, ಅವರು ಅದೇ ವರ್ಷದಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಗಾಗಿ ಸಿ.ಎನ್.ಬಿ.ಸಿ ಏಷ್ಯಾದ ಪ್ರಶಸ್ತಿಯನ್ನು ಪಡೆದರು ೨೦೨ ರಲ್ಲಿ, ಫಾರ್ಚೂನ್ ನಿಯತಕಾಲಿಕದ ಆರೋಗ್ಯ ರಕ್ಷಣೆ ವಿಭಾಗದಲ್ಲಿ '೪೦ ವರ್ಷದೊಳಗಿನ ೪೦ ' ಪಟ್ಟಿಯಲ್ಲಿ ಪೂನಾವಾಲ ಹೆಸರನ್ನು ಸೇರಿಸಲಾಗಿದೆ. ೨೦೨೧ ರಲ್ಲಿ, ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿದ, ಸೀರಮ್ ಇನ್‌ಸ್ಟಿಟ್ಯೂಟ್ ತಯಾರಿಸಿದ ಲಸಿಕೆ, ಕೋವಿಶೀಲ್ಡ್ ಅನ್ನು ಭಾರತದಲ್ಲಿ ಮತ್ತು ಜಾಗತಿಕವಾಗಿ ಬೃಹತ್ ಪ್ರಮಾಣದದಲ್ಲಿ ಯಶಸ್ವಿಯಾಗಿ ಪೂರೈಸಿ. ಕೋವಿಡ್ -೧೯ ವಿರುದ್ಧ ಹೋರಾಡುವಲ್ಲಿ ಅಪ್ರತಿಮ ಕೊಡುಗೆಗಾಗಿ ಅಡಾರ್ ಎಕನಾಮಿಕ್ ಟೈಮ್ಸ್‌ನಿಂದ ವರ್ಷದ ವಾಣಿಜ್ಯೋದ್ಯಮಿ ಎಂದು ಗುರುತಿಸಲ್ಪಟ್ಟಿದೆ. 2021 ರಲ್ಲಿ, ಟೈಮ್ 100 , ಟೈಮ್‌ನ '​ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ವಾರ್ಷಿಕ ಪಟ್ಟಿಯಲ್ಲಿ ಇವರ ಹೆಸರನ್ನು ಸೆರಿಸಲಾಯಿತು. == ಉಲ್ಲೇಖಗಳು == ಅಧಿಕೃತ ಜಾಲತಾಣ [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:೧೯೮೧ ಜನನ]] [[ವರ್ಗ: ]]